Watch - ಶ್ರೀ ಸತ್ಯಸಾಯಿ ದಿವ್ಯ ಹಾಸ್ಯ ಸೌರಭ | ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ | Sri Sathya Sai Divya Hasya Saurabha - Sri Sathya Sai | Sri Sathya Sai Media Centre
ಶ್ರೀ ಸತ್ಯಸಾಯಿ ದಿವ್ಯ ಹಾಸ್ಯ ಸೌರಭ | ಶ್ರೀ ಕೃಷ್ಣ ಜನ್ಮಾಷ್ಟಮಿ ವಿಶೇಷ | Sri Sathya Sai Divya Hasya Saurabha
Published on September 11, 2026 03:43 AM
Talks
ಶ್ರೀ ಕೃಷ್ಣಾವತಾರದಲ್ಲಿ ದಿವ್ಯತೆಯ ಜೊತೆಯಲ್ಲಿ ತುಂಟತನ, ಮುಗ್ಧತೆ ಮತ್ತು ಹಾಸ್ಯದ ಸಿಂಚನವೂ ಇದೆ. ಅದೇ ರೀತಿಯಲ್ಲಿ, ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ದಿವ್ಯ ವ್ಯಕ್ತಿತ್ವದಲ್ಲಿಯೂ ದೈವೀ ಹಾಸ್ಯ ಅಂತರ್ಗತವಾಗಿದೆ.
ಬಾಬಾರವರ ಹಾಸ್ಯ ಕೇವಲ ನಗಿಸುವುದಕ್ಕಾಗಿ ಇರಲಿಲ್ಲ. ಅದು ಅಹಂಕಾರವನ್ನು ಕರಗಿಸಲು, ತಪ್ಪನ್ನು ತಿದ್ದಲು, ಮನಸ್ಸನ್ನು ಹಗುರಗೊಳಿಸಲು ಮತ್ತು ಆಧ್ಯಾತ್ಮದ ಸತ್ಯವನ್ನು ಸರಳವಾಗಿ ತಿಳಿಸಲು ಒಂದು ಅದ್ಭುತ ಸಾಧನವಾಗಿತ್ತು. ಈ ದೈವೀ ಹಾಸ್ಯದ ಪ್ರತಿಯೊಂದು ಸನ್ನಿವೇಶದಲ್ಲೂ ಪ್ರೀತಿ, ಜ್ಞಾನ, ಕರುಣೆ ಮತ್ತು ಆತ್ಮಜಾಗೃತಿಯ ಸುಂದರ ಸಂದೇಶ ಅಡಗಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಈ ಸುಸಂದರ್ಭದಲ್ಲಿ, ಒಂದು ಸಂವಾದದ ಮೂಲಕ ಸ್ವಾಮಿಯವರ ದೈವೀ ಹಾಸ್ಯದ ಹಲವು ಮಧುರ ಪ್ರಸಂಗಗಳನ್ನು ಮೆಲುಕು ಹಾಕುವ ಪ್ರಯತ್ನವೇ “ಶ್ರೀ ಸತ್ಯ ಸಾಯಿ ದಿವ್ಯ ಹಾಸ್ಯ ಸೌರಭ.”
ಸ್ವಾಮಿಯವರ ಹಾಸ್ಯಮಯ ಪ್ರಸಂಗಗಳ ಮೂಲಕ ಅವರ ದೈವೀ ವ್ಯಕ್ತಿತ್ವದ ಒಂದು ಅಪೂರ್ವ ಹಾಗೂ ಆಪ್ತ ಆಯಾಮವನ್ನು ಮೆಲುಕುಹಾಕುವ ವಾಕ್ ಕುಸುಮವನ್ನು ಸ್ವಾಮಿಯ ಪಾದಪದ್ಮಗಳಿಗೆ ಸಮರ್ಪಿಸಲಾಗುತ್ತಿದೆ.
ಶ್ರೀಕೃಷ್ಣನ ಲೀಲೆಯ ಮುಗ್ಧ ನಗುವಿನಿಂದ ಸಾಯಿಯ ದಿವ್ಯ ಹಾಸ್ಯದ ಸೌರಭದವರೆಗೆ…ಈ ಅಪೂರ್ವ ಅನುಭವವನ್ನು ಸವಿಯೋಣ… ನಗೋಣ… ಮತ್ತು ಅದರೊಳಗಿನ ದಿವ್ಯ ಸಂದೇಶವನ್ನು ಅರಿಯೋಣ.